jump to navigation

ಲವ್ ಗುರು… ನಿನ್ನ ಸಹವಾಸ ಬೇಡಪ್ಪಾ August 1, 2009

Posted by varunbhat in ಚಿತ್ರ ವಿಮರ್ಶೆ.
trackback

ಮೊನ್ನೆ ಲವ್ ಗುರುಗೆ ಹೋಗಿದ್ದೆ. ಮನೆಯಲ್ಲಿ X-MEN III ನೋಡುವ ಪ್ಲಾನ್ ಇದ್ದದ್ದನ್ನು ಕ್ಯಾನ್ಸಲ್ ಮಾಡಿ ಲವ್ ಗುರುಗೆ ಹೋದೆ. ಅದು ದೊಡ್ಡ ತಪ್ಪು  ಅಂತ ನನಗೆ ಸ್ವಲ್ಪ ಸಮಯದಲ್ಲೇ ಗೊತ್ತಾಯ್ತು.

ಚಿತ್ರದ ತಾರಾಗಣ:‌ತರುಣ್, ರಾಧಿಕಾ ಪಂಡಿತ್, ದಿಲೀಪ್, ಹರೀಶ್ ರಾಜ್.

ಇದು ಒಬ್ಬ ಭಗ್ನ ಪ್ರೇಮಿಯ ಕಥೆ. ಅವನು ತನ್ನ ಪ್ರೀತಿಯನ್ನು ಪ್ರೇಯಸಿಗೆ ಹೇಳಲಾಗದೆ ಅವಳನ್ನು ಕಳೆದುಕೊLLಉತ್ತಾನೆ. ಭಗ್ನ ಪ್ರೇಮಿಯ ಪಾತ್ರದಲ್ಲಿ ತರುಣ್ ಅತ್ಯಂತ ಕೆಟ್ಟ ಅಭಿನಯವನ್ನು ನೀಡಿದ್ದಾರೆ. ರಾಧಿಕಾ ಪಂಡಿತ್ಗೆ ಕೂಡ ಅಭಿನಯ ಬರೋದಿಲ್ಲ, ಹಾಗಾಗಿ ಚಿತ್ರ ನೋಡೋದು ಒಂದು ದೊಡ್ಡ ಹಿಂಸೆಯಾಗಿ ಬಿಡ್ತು. ತರುಣ್ಗೆ  ಕಂಠದಾನ ಮಾಡಿರುವುದು ‘ಪಂಚೆ ಶ್ಯಾಮ’ ಅಲಿಯಾಸ್ ವಿಕ್ರಮ್ ಸೂರಿ. ಅದ್ಯಾರ ಮೇಲಿನ ಕೋಪಕ್ಕೆ ಪಂಚೆ ಶ್ಯಾಮ ಹಾಗೆ ಮಾಡಿdnಓ ಗೊತ್ತಿಲ್ಲ. ಒಟ್ಟಿನಲ್ಲಿ ಕಂಠದಾನ ತರುಣ್ಗೆ ಸ್ವಲ್ಪವು ಹೊಂದುವುದಿಲ್ಲ. ತರುಣ ಕೆಟ್ಟ ಅಭಿನಯ ತಾರಕಕ್ಕೆ ಏರೋದು, ಕುಡಿತದ ದ್ುಶ್ಯದಲ್ಲಿ.

ನಾನು ಕೆಟ್ಟ ಚಿತ್ರಗಳನ್ನು ನೋಡೋದಿಲ್ಲ ಎಂದು ಕೆಲವು ತಿಂಗಳ ಹಿಂದೆ ಪ್ರಮಾಣ ಮಾಡಿದ್ದೆ. ಅದು ಮುರಿದೆ ಸಿಟ್ಟಿಗೆ ಇರಬೇಕು, ನಾನು ಸಿನೇಮಾದ ವಿರಾಮದಲ್ಲೇ ಮನೆಗೆ ಹೊರಟಿದ್ದೆ. ನನ್ನ ಸ್ನೇಹಿತನ ಬಲವಂತಕ್ಕೆ ಅಲ್ಲೇ ಉಳಿದೆ.

ಇನ್ನು ಮುಂದೆ ಹೀಗೆ ಆಗಲ್ಲ. ಚಿತ್ರದ ವಿಮರ್ಶೆ ಓದಿದ ಮೇಲೇನೆ ನಾನು ಚಿತ್ರಮಂದಿರಕ್ಕೆ ಕಾಲಿಡೋದು.

ಈ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಅಪ್ಪಿ ತಪ್ಪಿನೂ ಹೋಗಬೇಡಿ. ಕೆಲವೇ ದಿನದಲ್ಲಿ ಈ ಚಿತ್ರ ಯಾವುದಾದ್ರು ಚಾನಲ್ನಲ್ಲಿ ಬರಲಿದೆ. ಜೀ ಕನ್ನಡ ಅಥವ ಉದಯದವರು ಯಾವುದಾದರು ಹಬ್ಬಕ್ಕೆ ಈ‌ಚಿತ್ರ ಹಾಕಿ ಹೇಳ್ತಾರೆ, “ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ, ಸೂಊಊಊಪರ್ ಹಿಟ್ ಚಲನಚಿತ್ರ ‘ಲವ್ ಗುರು'” ಅಂತ. ಅದನ್ನು ಕೇಳಿ ಮರುಳಾಗಬೇಡಿ..  ‘ಲವ್ ಗುರು’ ನಾನು ಇತ್ತೀಚೆಗೆ ಕಂಡ ಅತ್ಯಂತ ಡಬ್ಬ ಚಿತ್ರ.

Advertisements

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: