jump to navigation

ಬಹು ದಿನದ ಆಸೆ… August 1, 2009

Posted by varunbhat in ಪರಿಚಯ.
Tags:
add a comment

ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂದು ನನ್ನ ಆಸೆಯಾಗಿತ್ತು… ಆದರೆ ಅಷ್ಟರಲ್ಲಿ ನನ್ನ ಸೈಟ್ನ ಅವಧಿ ಮುಗಿದುಹೋಗಿತ್ತು… ಅದಕ್ಕಾಗಿ ನನ್ನ ವರ್ಡ್ಪ್ರೆಸ್ ಬ್ಲಾಗ್ನಲ್ಲಿ ಬರೀತಾ ಇದ್ದೀನಿ.. ಇನ್ನು ಮೇಲೆ ಈ ಬ್ಲಾಗ್ನಲ್ಲಿ ಕನ್ನಡದ ಲೇಖನಗಳನ್ನು ಮಾತ್ರ ಬರೆಯೋ ತೀರ್ಮಾನ ಮಾಡಿದ್ದೀನಿ.. ಈ  ಇಂಟರ್ನೆಟ್ ಯುಗದಲ್ಲಿ ನನ್ನ ಮಾತು ಸ್ವಲ್ಪ ದಡ್ಡತನದ್ದು ಅನ್ನಿಸಬಹುದು ನಿಮಗೆ, ಆದರೆ ಉಬುಂಟುನಲ್ಲಿ SCIM ನ ಸ್ವಲ್ಪ ತೊಂದರೆ ಇದ್ದ ಕಾರಣ ಇಷ್ಟು ದಿನ ಬರೆಯಲು ಆಗಲಿಲ್ಲ.. ಅದಕ್ಕೂ ಮುಂಚೆ ಎರಡು ತಿಂಗಳು ನನ್ನ ಲ್ಯಾಪ್ಟಾಪ್ ಕೆಟ್ಟು ಹೋಗಿ ಅದನ್ನು  ರಿಪೇರಿ ಮಾಡಿಸುವುದರಲ್ಲಿ ಸಮಯ ಕಳೆದು ಹೋಯ್ತು… ಅದರ ನಂತರ ೪ ವಾರ ಇಂಟರ್ನೆಟ್ ಇಲ್ಲದೆ ತೊಂದರೆ ಅನುಭವಿಸಿದೆ.. ಇಷ್ಟೆಲ್ಲ ಅಡೆತಡೆಗಳ ಮಧ್ಯೆ ನನ್ನ ಕನ್ನಡದ ಬ್ಲಾಗ್ ಮಾಡುವ ಆಸೆ ಹಾಗೆಯೇ ಉಳಿದಿತ್ತು.. ಇಂದು ಸಮಯ ಕೂಡಿ ಬಂದಿದೆ..